ಸೇತುವೆ ಮೇಲೆ ನಿಂತು ಕುಟುಂಬಸ್ಥರಿಂದ ಮೃತರ ಅಸ್ಥಿ ವಿಸರ್ಜನೆ, ಪಿಂಡ ಪ್ರದಾನಶ್ರೀರಂಗಪಟ್ಟಣದ ಕಾವೇರಿ ನದಿ ತಟದ ಪ್ರಮುಖ ಶ್ರಾದ್ಧಕಾರ್ಯ ನಡೆಸುತ್ತಿದ್ದ ಪಶ್ಚಿಮವಾಹಿನಿ, ಪಟ್ಟಣದ ಸ್ನಾನಘಟ್ಟ, ಸಂಗಮ ಹಾಗೂ ಘೋಸಾಯ್ ಘಾಟ್ ಪ್ರವಾಹದಿಂದ ಜಲಾವೃತವಾಗಿವೆ. ವಿವಿಧೆಡೆಯಿಂದ ಪಿಂಡ ಪ್ರದಾನ, ಅಸ್ಥಿ ವಿಸರ್ಜನೆ ಮಾಡಲು ಬರುವವರಿಗೆ ಸ್ಥಳಗಳಿಲ್ಲದೆ ಎಲ್ಲಂದರಲ್ಲೇ ನದಿ ಸಮೀಪದ ದಡದಲ್ಲೇ ನೀತು ಪಿಂಡ ತರ್ಪಣೆ ನಡೆಸು ಹೋಗುತ್ತಿದ್ದಾರೆ.