ಶತಮಾನದ ಭಾರತ ವಿಜ್ಞಾನದ ಭಾರತವಾಗಲಿ: ಎಡಿಸಿ ಡಾ.ಎಚ್.ಎಲ್.ನಾಗರಾಜುಪ್ರಸ್ತುತ ಸಮಾಜದಲ್ಲಿ ಸ್ವಾರ್ಥ ಮನಸ್ಥಿತಿಗಳು ತುಂಬಿಕೊಂಡಿವೆ. ಧನದಾಹಿ ಚಿಂತನೆಗಳು ಹೆಚ್ಚಿವೆ. ಇದನ್ನು ಹೋಗಲಾಡಿಸಬೇಕಾದರೆ ಕುವೆಂಪು ವಿಚಾರಧಾರೆಗಳು ಯುವಕರನ್ನು ಎಚ್ಚರಗೊಳಿಸಬೇಕು. ಕುವೆಂಪು ಅವರು ನೀಡಿದ ಸಂದೇಶಗಳು ಈಗಲೂ ಈಡೇರಿಲ್ಲ. ವ್ಯಕ್ತಿ ಪ್ರಜ್ಞೆ, ಜಾತಿ ಪ್ರಜ್ಞೆ, ಕೋಮು ಪ್ರಜ್ಞೆ, ಧರ್ಮಪ್ರಜ್ಞೆ, ಸಂಕುಚಿತ ಪ್ರಜ್ಞೆಗೆ ಅವಕಾಶವನ್ನು ನೀಡದೆ ಎಲ್ಲರೂ ವೈಚಾರಿಕ ಪ್ರಜ್ಞೆಗೆ ಹೆಚ್ಚಿನ ಮಹತ್ವ ನೀಡಬೇಕು.