ಜೆಡಿಎಸ್ಗೆ ಕಗ್ಗಂಟಾಗಿರುವ ಮಂಡ್ಯ ಕ್ಷೇತ್ರಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸುಲಭವಾಗಿ ಸಿಗಬಹುದಾದ ತುತ್ತೆಂದು ಭಾವಿಸಿದ್ದ ದಳಪತಿಗಳಿಗೆ ಮುಂದೆ ಕಬ್ಬಿಣದ ಕಡಲೆಯಾಗಬಹುದೆಂದು ಅವರು ನಿರೀಕ್ಷಿಸಿರಲಿಲ್ಲ. ಬಿಜೆಪಿ ಜೊತೆಗೆ ಮಾಡಿಕೊಂಡಿರುವ ಚುನಾವಣಾ ಮೈತ್ರಿಯಿಂದ ಸೀಟು ಹಂಚಿಕೆ ಸಮಯದಲ್ಲಿ ಮಂಡ್ಯ ಕ್ಷೇತ್ರಕ್ಕಾಗಿ ಕಮಲ ನಾಯಕರೆದುರು ಹರಸಾಹಸ ನಡೆಸುವಂತಾಗಿದೆ.