ಕ್ಯಾನ್ಸರ್ ರೋಗಿಗಳ ಮರಣ ತಗ್ಗಿಸುವ ಗುರಿ: ಡಾ.ಸುಹಾಸ್ಅತ್ಯಾಧುನಿಕ ಹೈ ಫೆಕ್ ಶಸ್ತ್ರ ಚಿಕಿತ್ಸೆಯೊಂದಿಗೆ ಕ್ಯಾನ್ಸರ್ ರೋಗಿಗಳ ಮರಣ ಪ್ರಮಾಣವನ್ನು ಕಡಿಮೆಗೊಳಿಸಿ ಹೆಚ್ಚು ಕಾಲ ಬದುಕುಳಿಯುವಂತೆ ಚಿಕಿತ್ಸೆ ನೀಡುವ ಯೋಜನೆ ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಲಭ್ಯವಿದ್ದು ಇದರ ಸದುಪಯೋಗಕ್ಕೆ ಮುಂದಾಗಬೇಕು. ಆಹಾರ ಪದ್ಧತಿಯಲ್ಲಿ ಬದಲಾವಣೆ, ಕಲುಷಿತ ಹಾಗೂ ರಾಸಾಯನಿಕಯುಕ್ತ ಆಹಾರ ಬಳಕೆ, ಬದಲಾದ ಜೀವನ ಪದ್ಧತಿ, ಬೊಜ್ಜುತನದ ಹೆಚ್ಚಳ, ಕಡಿಮೆ ಶ್ರಮದಾನ ಹಾಗೂ ಜಂಕ್ಫುಡ್ಗಳ ಬಳಕೆಯಿಂದಲೂ ಕ್ಯಾನ್ಸರ್ ಕಾಯಿಲೆ ಗೋಚರಿಸಲಿದ್ದು, ನಿಗಾ ವಹಿಸುವ ಅಗತ್ಯತೆ ಇದೆ.