ಧ್ವಜಸ್ತಂಭ ತೆರವಿಗೆ ಆದೇಶ ಹೊರಡಿಸಿದ್ದ ತಾಲೂಕು ಆಡಳಿತತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಅವರ ಸಹಿ ಇರುವ ಆದೇಶ ಪ್ರತಿಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ, ತಾಪಂ ಇಒ, ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ರವಾನಿಸಿರುವುದಲ್ಲದೆ, ಜ.೨೫ರಂದು ಸಂಜೆ ೭.೩೦ಕ್ಕೆ ಪಿಡಿಒ ಅವರು ಪ್ರತಿಯನ್ನು ಸ್ವೀಕರಿಸಿರುವ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.