ಹನುಮಧ್ವಜ ವಿವಾದಕ್ಕೆ ಕೆರಗೋಡು ಗ್ರಾಪಂ ಕಾರಣ: ಸಿ.ಡಿ.ಗಂಗಾಧರ್ಸಭಾ ನಡಾವಳಿಯಲ್ಲಿ ಪರ, ವಿರೋಧ, ತಟಸ್ಥ ನಿಲುವಿನ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಕ್ಕೂ ಮುನ್ನ ಸಂಬಂಧಿಸಿದ ಸಂಘ ಸಂಸ್ಥೆಗಳು ಧ್ವಜ ಹಾರಿಸುವ ಕುರಿತಂತೆ ಅರ್ಜಿ ಸಲ್ಲಿಸಿ ಆ ವಿಚಾರ ಸಭೆ ಗಮನಕ್ಕೆ ಬಂದ ತಕ್ಷಣವೇ ಕಾನೂನು ರೀತ್ಯ ಅಧಿಕಾರ ವ್ಯಾಪ್ತಿ ಕುರಿತು ಚರ್ಚೆ ನಡೆಸಿ ಅಂತಿಮವಾಗಿ ಅರ್ಜಿದಾರರಿಗೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಷರಾ ನೀಡಬೇಕಿತ್ತು. ಆದರೆ, ಈ ಬಗ್ಗೆ ಚರ್ಚೆ ನಡೆಸಿರುವುದೇ ಅಕ್ಷಮ್ಯ.