ರಾಜಕೀಯ ಅಸ್ತಿತ್ವಕ್ಕಾಗಿ ಮರಾಠಿಗರಿಂದ ಚೇಷ್ಟೆ: ಸಚಿವ ಚಲುವರಾಯಸ್ವಾಮಿರಾಜಕೀಯ ಅಸ್ತಿತ್ವಕ್ಕಾಗಿ ಬೆಳಗಾವಿಯಲ್ಲಿ ಮರಾಠಿಗರು ಹಿಂದಿನಿಂದಲೂ ಚೇಷ್ಟೆ ಮಾಡುತ್ತಿದ್ದಾರೆ. ಆದರೆ, ನಾಡು, ನುಡಿ, ನೆಲ, ಜಲಗಳಿಗೆ ಯಾವುದೇ ಧಕ್ಕೆ ಬಾರದಂತೆ ಅಖಂಡ ಕರ್ನಾಟಕದ ಅಸ್ತಿತ್ವವನ್ನು ರಾಜ್ಯ ಸರ್ಕಾರ ಕಾಪಾಡುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.