ಎಚ್ಡಿಕೆಗೆ ನಮ್ಮನ್ನು ನೋಡಿ ಸಹಿಸೋಕಾಗುತ್ತಿಲ್ಲ: ಸಚಿವಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನಾನು ಅಧಿಕಾರದಲ್ಲಿರುವುದನ್ನು ನೋಡಿ ಎಚ್ಡಿ ಕುಮಾರಸ್ವಾಮಿ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ಖುಷಿಯಾಗಿರಬೇಕು ಎಂದರೆ ನಾವು ರಾಜಕೀಯದಿಂದ ನಿವೃತ್ತಿಯಾಗಬೇಕು. ಆಗಲಾದರೂ ನೆಮ್ಮದಿಯಾಗಿರುತ್ತಾರೋ ನೋಡಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ ಮಾಡಿದರು.