ದೇಶದ ಋಣ ತೀರಿಸಲು ಯುವಜನತೆ ಮುಂದಾಗಲು ಕೆ.ಮರೀಗೌಡ ಕರೆವಿದ್ಯಾರ್ಥಿಗಳು ಈ ದೇಶದ ಸಂಪತ್ತು, ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಪೈಪೋಟಿ ನಡೆಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ, ಛಲ ಇಟ್ಟುಕೊಂಡು ಸಾಧನೆ ಮಾಡಿ, ತಂದೆ- ತಾಯಿ ಮತ್ತು ದೇಶಕ್ಕೆ ಕೀರ್ತಿ ತರಬೇಕು. ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದ್ದು, ಬೇರೆ ದೇಶಕ್ಕೆ ಹೋಗದೆ ನಮ್ಮ ದೇಶದಲ್ಲಿಯೇ ಕೆಲಸ ಮಾಡಿ ದೇಶದ ಋಣ ತೀರಿಸಲು ಯುವಜನತೆ ಮುಂದಾಗಬೇಕು.