ರಾಷ್ಟ್ರೀಯ ಪತಂಗ ಸ್ಪರ್ಧೆಯ ಪೋಸ್ಟ್ ಕಾರ್ಡ್ ಚಿತ್ರಕಲಾ ಸ್ಪರ್ಧೆಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಯ ಪರಿಚಯವೇ ಇಲ್ಲ ಅದರಲ್ಲೂ ಪೋಸ್ಟ್ ಕಾರ್ಡ್ ಪರಿಚಯವಂತು ಇಲ್ಲವೇ ಇಲ್ಲ. ಪೋಸ್ಟ್ ಕಾರ್ಡ್ ಬರೆಯುವ ಸಂಸ್ಕೃತಿಯು ನಿಂತು ಹೋಗಿದೆ. ವಿದ್ಯಾರ್ಥಿಗಳಿಗೆ ಪೋಸ್ಟ್ ಕಾರ್ಡ್ ಪರಿಚಯಿಸುವುದು, ಪತಂಗ ಸಪ್ತಾಹ, ಪತಂಗಗಳ ಮಹತ್ವ ತಿಳಿಸುವುದು, ಪತಂಗಗಳಿಗೂ ಮತ್ತು ಚಿಟ್ಟೆಗಳಿಗೂ ಇರುವ ವ್ಯತ್ಯಾಸ ತಿಳಿಸುವುದಕ್ಕಾಗಿ ಈ ರಾಜ್ಯಮಟ್ಟದ ಪೋಸ್ಟ್ ಕಾರ್ಡ್ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.