ಮಕ್ಕಳಿಗಾಗಿ ರಂಗಶಾಲೆ ಆರಂಭಿಸಿ: ಬಾದಲ್ ನಂಜುಂಡಸ್ವಾಮಿನನ್ನ ಮತ್ತು ರಂಗಾಯಣದ ಸಂಬಂಧ ಭಾವನಾತ್ಮಕವಾದದ್ದು. ನಮ್ಮ ಮನೆಯಿಂದ ರಂಗಾಯಣ ಕಟ್ಟಡ ನೋಡಿದರೆ ಕೌತುಕ, ಅಚ್ಚರಿಯಾಗುತ್ತದೆ. ಆದ್ದರಿಂದ ನನಗೂ ರಂಗಾಯಣಕ್ಕೂ ಅವಿನಾಭಾವ ಸಂಬಂಧವಿದೆ. ನಾನು ಅನೇಕ ನಿರ್ದೇಶಕರ ಜತೆ ಕೆಲಸ ಮಾಡುವ ಅವಕಾಶವನ್ನು ರಂಗಾಯಣ ನನಗೆ ನೀಡಿದೆ. ಇಲ್ಲಿನ ಒಬ್ಬೊಬ್ಬ ಕಲಾವಿದರೂ ಒಂದೊಂದು ವಿಶ್ವಕೋಶದಂತೆ ಕಾಣುತ್ತಾರೆ.