ಪಾಲಿ, ಪ್ರಾಕೃತಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಕೇಂದ್ರ ಸಕಾರಾತ್ಮಕ ಸ್ಪಂದನೆ: ಪ್ರೊ.ಉದಯ ನಾರಾಯಣ ಸಿಂಗ್ಒಂದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಬೇಕಾದರೇ ಕೇಂದ್ರ ಸರ್ಕಾರವು ಅನೇಕ ವಿಷಯಗಳಿಗೆ ಬದ್ಧತೆ ತೋರಿಸಬೇಕಾಗುತ್ತದೆ. ಆ ಭಾಷೆಯ ಬೆಳವಣಿಗೆಗೆ, ಸಂಶೋಧನೆಗೆ ಅನುದಾನ ಮೀಸಲಿಡಬೇಕಾಗುತ್ತದೆ. ಕಟ್ಟಡ- ಕಚೇರಿ, ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿ ಎಲ್ಲವನ್ನೂ ವ್ಯವಸ್ಥೆ ಮಾಡಬೇಕಾಗುತ್ತದೆ. ಆದ್ದರಿಂದ ಸ್ಥಾನಮಾನ ನೀಡುವ ವಿಚಾರ ಸರ್ಕಾರದ್ದೇ ಆಗಿದೆ.