ಸರ್ಕಾರಗಳಿಗೆ ಸೋಲು, ಗೆಲುವಿನ ಚೆಲ್ಲಾಟ, ರೈತರಿಗೆ ಪ್ರಾಣ ಸಂಕಟ: ಕಬ್ಬು ಬೆಳೆಗಾರರ ಸಂಘ ಕಿಡಿಈಗಾಗಲೇ ಎಲ್ಲಾ ಕೆರೆ ಕಟ್ಟೆಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು, ಬೆಳೆದು ನಿಂತಿರುವ ಬೆಳೆಗಳು ನೀರಿಲ್ಲದೆ ಒಣಗಿ ಹಾಳಾಗಿವೆ. ಕೃಷಿ ಪಂಪ್ ಸೆಟ್ ನಂಬಿ ಬೆಳೆ ಬೆಳೆದು ಬದುಕುತ್ತಿದ್ದ ರೈತರು ಬೋರ್ ವೆಲ್ ಗಳಲ್ಲಿ ನೀರು ನಿಂತು ಹೋದ ಕಾರಣ ಬೆಳೆಗಳು ಒಣಗಿ ನೆಲ ಕಚ್ಚಿದ್ದು, ಅವರ ಬದುಕು ಕೂಡಾ ದುಸ್ತರವಾಗಿದೆ. ಗ್ರಾಮೀಣ ಭಾಗದಲ್ಲಿ ಜನ - ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಕಾಡುತ್ತಿದ್ದು, ಕೊರತೆ ನೀಗಿಸಲು ಸರ್ಕಾರಗಳು ಕೈ ಚೆಲ್ಲಿ ಕುಳಿತು ಚುನಾವಣೆಯ ತಮ್ಮ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದು, ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.