ಒಬ್ಬ ವ್ಯಕ್ತಿ ಶ್ರೇಷ್ಠ ಕವಿಯಾಗಲು ಪ್ರಜ್ಞೆ, ಪ್ರತಿಭೆ ಬಹಳ ಮುಖ್ಯ: ನಾಗತಿಹಳ್ಳಿ ಚಂದ್ರಶೇಖರ್ಕಾವ್ಯ ಎನ್ನುವುದು ಒಂದು ಗಂಭೀರ ಕಲೆ. ಅದರ ಆಸಕ್ತಿ ಆಸ್ಪದಕ್ಕೆ ವಿಶಿಷ್ಟವಾದ ಮನಸ್ಥಿತಿ ಅವಶ್ಯಕತೆ ಇದೆ. ಅಂತಹ ವಿಶಿಷ್ಟ ಮನಸ್ಥಿಯುಳ್ಳವರು ಕಾವ್ಯಗಾರನಾಗಲು ಸಾಧ್ಯ. ಕಾವ್ಯವು ಪ್ರಜ್ಞೆ, ಪ್ರಶ್ನೆ, ಪ್ರತಿಭಟನೆ, ಪ್ರಯೋಗ ಹಾಗೂ ಪ್ರಮಾಣ ಎಂಬ ಅಂಶಗಳನ್ನು ಒಳಗೊಂಡಿದ್ದು, ಇವು ಕಾವ್ಯದ ಆಕಾರವನ್ನು ಸೃಷ್ಟಿಸುತ್ತವೆ. ಅದನ್ನು ಅಳವಡಿಸಿಕೊಂಡು ಕವಿತೆಗಳನ್ನು ಬರೆಯಬೇಕು.