ಪುಸ್ತಕೋದ್ಯಮ ಹೆಸರಿಗೆ ಮಾತ್ರವೇ ಉದ್ಯಮವಾಗಿದೆ: ವೀರಕಪುತ್ರ ಶ್ರೀನಿವಾಸಜನಸಾಮಾನ್ಯರ ಕಣ್ಣಲ್ಲಿ ಬರಹಗಾರ ಬಡವನಾಗಿರುತ್ತಾನೆ. ಜೋಳಿಗೆ, ಜುಬ್ಬ ಧರಿಸಿರುತ್ತಾನೆ ಎಂಬ ಕಲ್ಪನೆಗಳೇ ಇವೆ. ಅವನ ಸೃಜನಶೀಲತೆಗೆ ತಕ್ಕ ಮನ್ನಣೆ, ಹಣ, ಆದಾಯವು ಸಿಗಬೇಕು. ಸಾಹಿತ್ಯ ಲೋಕದ ಹೊಸ ಪುಸ್ತಕಗಳು ಪ್ರತಿಯೊಬ್ಬ ಓದುಗನಿಗೂ ತಲುಪಬೇಕು. ಹುಡುಕಿಕೊಂಡು ಅಲೆಯುವಂತಾಗಬಾರದು. ಎಲ್ಲಾ ರೀತಿಯ ಬರಹಗಳು ಕನ್ನಡಿಗನಿಗೆ ಸಿಗಬೇಕು.