ಗೋಡೌನ್ ಆದ ಸಿಐಟಿಬಿ ಛತ್ರ, ಪಾಳು ಬಿದ್ದ ನಾಲ್ವಡಿ ಸಮುದಾಯ ಭವನ..!ಹೆಬ್ಬಾಳು ಬಡಾವಣೆ ಕಡು ಬಡವರು, ಮಧ್ಯಮವರ್ಗದವರು ವಾಸಿಸುವ ಬಡಾವಣೆಯಾಗಿದ್ದು, ಈ ಬಡಾವಣೆ ನಿರ್ಮಾಣದ ವೇಳೆ ಅಲ್ಲಿನ ಜನರ ಅನುಕೂಲಕ್ಕೆಂದೇ ಸಿಐಟಿಬಿ ವತಿಯಿಂದ ನಿರ್ಮಾಣವಾಗಿದ್ದ ಸಮುದಾಯ ಭವನ ಅಧಿಕಾರಿಗಳ ದುರುದ್ದೇಶದಿಂದ ಇಂದು ಗೋಡೌನ್ ಆಗಿ ಬದಲಾಗಿದೆ.