ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಯುಗಾದಿ ಮಹಾಭಿಷೇಕಶ್ರೀಮನ್ ಮಧ್ವಾಚಾರ್ಯ, ಟೀಕಾಚಾರ್ಯ, ವ್ಯಾಸರಾಜಾದಿ ಯತಿಗಳ ಪ್ರತಿಮಾ ಸ್ಥಾನೀಯರಾದ ಹಾಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಂಸ್ಥಾನ ಪ್ರತಿಮೆಗಳಿಗೆ ಬೆಳಗ್ಗೆ 8 ರಿಂದ 12 ರವರೆಗೆ ಮಹಾಭಿಷೇಕ ನೆರವೇರಿಸುವರು. ಸಂಸ್ಥಾನದ ಮುಖ್ಯ ಆರಾಧ್ಯ ಪ್ರತಿಮಾ ಶ್ರೀ ಮೂಲ ಗೋಪಾಲಕೃಷ್ಣ ದೇವರು, ಶ್ರೀ ಮೂಲ ಪಟ್ಟಾಭಿರಾಮ ದೇವರು ಮತ್ತು ಪರಂಪರಾಗತ ಸಾಲಿಗ್ರಾಮಗಳಿಗೆ ಹಾಲು, ಮೊಸರು, ತುಪ್ಪ, ಜೇನು, ಎಳನೀರು ಸಹಿತ ಪಂಚಾಮೃತ ಅಭಿಷೇಕ ಮಾಡಲಾಗುವುದು.