ರಂಜಾನ್ ಈದ್ ಶಾಪಿಂಗ್ ಮೇಳ ಏಪ್ರಿಲ್ 11ಕ್ಕೆ ಮುಕ್ತಾಯಮೈಸೂರು ನಗರ, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಸೇರಿದಂತೆ ವಿವಿಧ ಕಡೆಗಳಿಂದ ಜನರು ಈ ಮೇಳಕ್ಕೆ ಬರುತ್ತಿದ್ದಾರೆ. ಈ ಮೇಳವು ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯರಾತ್ರಿವರೆಗೆ ತೆರೆದಿರುತ್ತದೆ. ಸಂಘದ ಆಡಳಿತ ಮಂಡಳಿಯು ಗ್ರಾಹಕರಿಗೆ ನಾಗರಿಕ ಸೌಲಭ್ಯಗಳು, ಶೌಚಾಲಯ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ನಂತಹ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಲ್ಲದೆ ಮೈಸೂರಿನ ಅಶೋಕ ರಸ್ತೆಯ ಮೀಲಾದ್ ಬಾಗ್ ನಲ್ಲಿ ಉಪವಾಸ ಮಾಡುವವರಿಗೆ, ಮಹಿಳೆಯರಿಗೆ ಇಫ್ತಾರ್ ವ್ಯವಸ್ಥೆ ಮಾಡಲಾಗುತ್ತಿದೆ.