• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ನಕಲಿ ಗುಟ್ಕಾ ತಯಾರಿಕೆ ಘಟಕ: ಪೊಲೀಸರಿಂದ ತೀವ್ರ ತನಿಖೆ
ನಗರದ ಹೊರವಲಯದ ಅಜ್ಜಯ್ಯನಗುಡಿ ರಸ್ತೆಯ ಖಾಸಗಿ ಮಿಲ್‌ನಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮುಂಬೈನ ಜೆಎಂಜೆ ಗುಟ್ಕಾ ತಯಾರಿಕಾ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್‌ಕುಮಾರ್ ಜೈನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ
ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಪಡೆಯಲು ಅಭ್ಯರ್ಥಿಗಳ ಪೈಪೋಟಿ ಆರಂಭವಾಗಿದ್ದು, ಶನಿವಾರ ಜೆಜೆ ಹಟ್ಟಿ ತಿಪ್ಪೇಸ್ವಾಮಿ ವಿನೂತನ ಪಾದಯಾತ್ರೆ ಹಮ್ಮಿಕೊಳ್ಳುವುದರ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆದಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ತಮಟಕಲ್ಲು ಆಂಜನೇಯ ಸ್ವಾಮಿ ದೇವಸ್ಥಾನವದವರೆಗೆ ಸುಮಾರು ಆರು ಕಿಮೀ ವರೆಗೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿದ ತಿಪ್ಪೇಸ್ವಾಮಿ ನಂತರ ಆಂಜನೇಯ ಸ್ವಾಮೀಜಿಗೆ ಪೂಜೆ ಸಲ್ಲಿಸಿ, ಟಿಕೆಟ್ ಗಾಗಿ ಪ್ರಾರ್ಥಿಸಿದರು.
ಸಾವಯವ ಕೃಷಿಯಿಂದ ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ
ರೈತರು ಸಾವಯವ ಕೃಷಿ ಅನುಸರಿಸಿದಲ್ಲಿ ಆತ್ಮಹತ್ಯೆಯಂತಹ ಜೀವ ವಿರೋಧಿ ನಿಲುವುಗಳಿಂದ ದೂರ ಸರಿಯಬಹುದೆಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳಧ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾವು ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುವವರೆಗೂ ಶೋಷಣೆ ತಪ್ಪಿದ್ದಲ್ಲ. ಸರ್ಕಾರ ಮತ್ತು ಮಧ್ಯವರ್ತಿಗಳು ಬೆಲೆ ನಿಗದಿ ಮಾಡುವ ಪ್ರಕ್ರಿಯೆಗೆ ಇತಿಶ್ರೀ ಹಾಡಬೇಕಿದೆ ಎಂದರು.
ಇ-ಆಫೀಸ್‌ನಿಂದ ಸಾರ್ವಜನಿಕರಿಗೆ ಅನುಕೂಲ: ಶಾಸಕ ಚಂದ್ರಪ್ಪ
ತಾಲೂಕು ಕಚೇರಿಗೆ ಬರುವ ಸಾರ್ವಜನಿಕರ ಕೆಲಸ ಸುಗಮವಾಗಲಿ ಎನ್ನುವ ಸದುದ್ದೇಶವಿಟ್ಟುಕೊಂಡು ರಾಜ್ಯ ಸರ್ಕಾರ ಇ- ಆಫೀಸ್ ಜಾರಿಗೆ ತಂದಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಪೊಲೀಸರನ್ನೂ ಕುಟುಂಬದ ಸದಸ್ಯರಂತೆ ನೋಡಿ: ನ್ಯಾ.ರೇಖಾ
ಪೊಲೀಸರ ಕರ್ತವ್ಯ ನಿಷ್ಠೆಯಿಂದ ಜನರು ಶಾಂತಿಯುತ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಪೊಲೀಸರನ್ನು ಕುಟುಂಬದ ರಕ್ಷಣೆ ಮಾಡುವ ಓರ್ವ ಸದಸ್ಯರಾಗಿ ಸ್ವೀಕಾರ ಮಾಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಹೇಳಿದರು.
- ಚಳ್ಳಕೆರೆಯಲ್ಲಿ ನಕಲಿ ಗುಟ್ಕಾ ತಯಾರಿಕ ಘಟಕ<bha>;</bha> ದೂರು
ಚಳ್ಳಕೆರೆ ನಗರದ ಅಜ್ಜಯ್ಯಗುಡಿ ರಸ್ತೆಯ ಹಳೆಯದಾದ ಖಾಸಗಿ ಮಿಲ್‌ನಲ್ಲಿ ಯಾವುದೇ ನಾಮಫಲಕವಿಲ್ಲದೆ ನಕಲಿ ಗುಟ್ಕಾವನ್ನು ತಯಾರು ಮಾಡಲಾಗುತ್ತಿತ್ತು. ಮುಂಬೈನ ಜೆಎಂಜೆ ತಯಾರಿಕೆ ಮತ್ತು ಮಾರಾಟ ಘಟಕ ವ್ಯವಸ್ಥಾಪಕ ಅಜಯ್‌ಕುಮಾರ್ ಜೈನ್ ಈ ಬಗ್ಗೆ ದೂರು ನೀಡಿದ್ದು, ನಮ್ಮ ಕಂಪನಿಯ ಟ್ರೇಡ್ ಮಾರ್ಕ್ ಆದ ಜಿಒಎ ನಂ-೦೧, ಜೊತೆಯಲ್ಲಿ ಜೆ.ಎಂ. ಜೋಶಿಯವರ ಭಾವಚಿತ್ರ ಉಪಯೋಗಿಸಿ ನಮ್ಮ ಕಂಪನಿ ತಯಾರು ಮಾಡದ ಪಾನ್ ಮಸಾಲ ಮತ್ತು ಅಡಿಗೆ ಉತ್ಪನ್ನಗಳನ್ನು ನಮ್ಮ ಟ್ರೇಡ್ ಮಾರ್ಕ್ ದುರುಪಯೋಗಿಸಿಕೊಂಡು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೂ ಸಹ ಪ್ರಾಣಕ್ಕೆ ಅಪಾಯವಾಗುವ ಸಂಭವಿದ್ದು, ನಕಲಿ ಗುಟ್ಕಾ ಘಟಕದ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇನ್ಮೇಲೆ ಒಂದೇ ಪಕ್ಷದಲ್ಲಿ ಡಿ.ಸುಧಾಕರ್‌, ಪೂರ್ಣಿಮಾ
ನಮ್ಮೆಲ್ಲರ ನಾಯಕರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಾಕರ್ ಅಣ್ಣನವರೇ...,ಹಿರಿಯೂರು ತಾಲೂಕಿನಲ್ಲಿ ಇನ್ಮೇಲೆ ಎಲ್ಲಿಯೇ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ನಡೆಯಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಭಾಷಣ ಹೀಗೆ ಆರಂಭವಾಗುತ್ತದೆ. ಕಳೆದೆರೆಡು ಚುನಾವಣೆಗಳಲ್ಲಿ ಸಾಂಪ್ರದಾಯಿಕ ಎದುರಾಳಿಯೆಂದೇ ಸುಧಾಕರ್ ಅವರನ್ನು ಪೂರ್ಣಿಮಾ ಶ್ರೀನಿವಾಸ್ ಪರಿಗಣಿಸಿದ್ದರು. ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಪೂರ್ಣಿಮಾ ಶ್ರೀನಿವಾಸ್ ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಮಾತಿನ ಧಾಟಿ ಬದಲಾಗಲು ಕಾರಣವಾಗಿದೆ.
ನಾಳೆ ಡಾ.ಸೈಯದ್ ನಾಸೀರ್ ಹುಸೇನ್ ಗೆ ಸನ್ಮಾನ
ರಾಜ್ಯಸಭಾ ಸದಸ್ಯ ಸಿಡಬ್ಲ್ಯುಸಿ ಮೆಂಬರ್ ಡಾ.ಸೈಯದ್ ನಾಸಿರ್ ಹುಸೇನ್‌ಗೆ ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಅ.22 ರಂದು ಬೆಳಗ್ಗೆ 10-30 ಕ್ಕೆ ತರಾಸು ರಂಗಮಂದಿರದಲ್ಲಿ ಹೃದಯಸ್ಪರ್ಶಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರುಪಾಯಿ ಹಣ ವಂಚನೆ
ಸೇನೆ ಹಾಗೂ ರೇಲ್ವೆ ಇಲಾಖೆಯಲ್ಲಿ ಗ್ರಾಮೀಣ ಯುವಕರಿಗೆ ಕ್ರೀಡಾ ಕೋಟಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸುಮಾರು 16 ಲಕ್ಷಕ್ಕೂ ಹೆಚ್ಚು ಹಣ ಪಡೆದು ಮೋಸ ಮಾಡಿರುವ ಪ್ರಕರಣ ತಾಲೂಕಿನ ಶ್ರೀರಾಂಪುರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಭಂದಿಸಿದಂತೆ ಶಿವರಾಜ್‌ (45) ಹಾಗೂ ಭೀಮವ್ವ ಎಂಬುವವರ ಮೇಲೆ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.
ಮುರುಘಾಮಠದಲ್ಲಿ ಇಂದಿನಿಂದ ಶರಣ ಸಂಸ್ಕೃತಿ ಉತ್ಸವ
ಮಧ್ಯ ಕರ್ನಾಟಕದ ಜನಪ್ರಿಯ ದಸರಾವೆಂದೇ ಖ್ಯಾತಿ ಪಡೆದ ಚಿತ್ರದುರ್ಗ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ ಅ.21 ರಿಂದ 25 ವರೆಗೆ ನಡೆಯಲಿದ್ದು, ಉತ್ಸವ ಸಮಿತಿ ಗೌರವಾಧ್ಯಕ್ಷ ಅಥಣಿ ಗಚ್ಚಿನ ಮಠದ ಶಿವಬಸವ ಮಹಾಸ್ವಾಮಿಗಳು, ಎಸ್.ಜೆಎಂವಿದ್ಯಾಪೀಠದ ಕಾಯನಿರ್ವಾಣಾಧಿಕಾರಿ ಎಂ.ಭರತ್ ಕುಮಾರ್ ಶುಕ್ರವಾರ ಪೂರ್ವ ಸಿದ್ದತೆ ಪರಿಶೀಲಿಸಿದರು. ಇಂದು ಬೆಳಗ್ಗೆ 10ಕ್ಕೆ ಶ್ರೀಮಠದ ಅನುಭವ ಮಂಟಪ ಅವರಣದಲ್ಲಿ ಬಸವತತ್ವ ಧ್ವಜಾರೋಹಣ ನೆರವೇರಲಿದ್ದು, ಹುಣಸೇಮಠದ ಚನ್ನಬಸವ ಸ್ವಾಮೀಜಿ, ಶ್ರೀ ಗುರು ಬಸವೇಶ್ವರ ಸಂಸ್ಥಾನಮಠದ ಶಿವಾನಂದ ಶ್ರೀಗಳು ಸಮ್ಮುಖ ವಹಿಸುವರು. ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಧ್ವಜಾರೋಹಣ ನೆರವೇರಿಸಲಿದ್ದು, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಆಗಮಿಸುವರು.
  • < previous
  • 1
  • ...
  • 464
  • 465
  • 466
  • 467
  • 468
  • 469
  • 470
  • 471
  • 472
  • next >
Top Stories
ಚಿಕ್ಕಮಗಳೂರಿನಲ್ಲಿ ನೂತನ ತಿರುಪತಿ ರೈಲು ಸಂಚಾರಕ್ಕೆ ನಮಸ್ಕರಿಸಿದ ಮಹಿಳೆ
ಆಸ್ತಿ ಸರ್ಕಾರಕ್ಕೆ ನೀಡುವೆ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
ರವಿಶಂಕರ್‌ ಗುರೂಜಿ ಬಯೋಪಿಕ್‌ನಲ್ಲಿ ನಟಿಸಲು ವಿಕ್ರಾಂತ್‌ ಮಾಸಿ ತಯಾರಿ
ತಿರುಪತಿ - ಚಿಕ್ಕಮಗಳೂರು ನೂತನ ರೈಲು ಸಂಚಾರಕ್ಕೆ ಚಾಲನೆ
ಕಾಂಗ್ರೆಸ್‌ನಿಂದ ಜನತೆಯ ಸುಲಿಗೆ: ನಿಖಿಲ್‌ ಕುಮಾರಸ್ವಾಮಿ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved