ಆರ್‌ಎಸ್‌ಎಸ್‌ನಲ್ಲಿ ಜಾತಿ, ವರ್ಗ ಭೇದವಿಲ್ಲ: ಗುರುಪ್ರಸಾದ್ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಯಾವುದೇ ಜಾತಿ, ವರ್ಗ ಭೇದಗಳಿಗೆ ಅವಕಾಶವಿಲ್ಲ. ದಿನಂಪ್ರತಿ ಒಂದು ಗಂಟೆಯ ಶಾಖೆಯಲ್ಲಿ ಎಲ್ಲ ಬೇಧಭಾವ ತೊರೆದು, ನಾವೆಲ್ಲರೂ ಭಾರತಾಂಬೆ ಮಕ್ಕಳು ಎಂಬ ಮನೋಭಾವ ತಂತಾನೇ ರೂಪುಗೊಳ್ಳುತ್ತದೆ ಎಂದು ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಪ್ರಚಾರಕ ಗುರುಪ್ರಸಾದ್ ಹೇಳಿದ್ದಾರೆ.