ಸಮಸ್ತ ಪರಿಶಿಷ್ಟರು ಬೌದ್ಧ ಎಂದೇ ಬರೆಸಿ: ರಮೇಶ ಡಾಕುಳಗಿ: ರಮೇಶ ಡಾಕುಳಗಿಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಧಾರದ ಮೇಲೆ ಮೀಸಲಾತಿ ಅನುಭವಿಸುತ್ತಿರುವ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿ ಜನಾಂಗದವರು ಧರ್ಮದ ಕಾಲಂನಲ್ಲಿ ಬೌದ್ಧ ಎಂದು, ಜಾತಿ ಕಾಲಂನಲ್ಲಿ ಹೊಲೆಯ, ಮಾದಿಗ, ಎಂಬಿತ್ಯಾದಿ ಜಾತಿಗಳ ಹೆಸರು ಬರೆಸಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಕರೆ ನೀಡಿದರು.