ಧರ್ಮ ಕಾಲಂನಲ್ಲಿ ಬೌದ್ಧ, ಜಾತಿಯಲ್ಲಿ ಹೊಲೆಯ ಬರೆಸಿಆರ್ಥಿಕ, ಸಾಮಾಜಿಕ ಗಣತಿಯಲ್ಲಿ ಬಾಬಾ ಸಾಹೇಬರ ಎಲ್ಲ ಅನುಯಾಯಿಗಳು ಧರ್ಮ ಕಾಲಂ 8ರಲ್ಲಿ ‘ಬೌದ್ಧ’ ಎಂದೇ ಬರೆಸಬೇಕು, ಜಾತಿ ಕಾಲಂ ನಂ 9ರಲ್ಲಿ ಪರಿಶಿಷ್ಟ ಜಾತಿ ‘ಹೊಲೆಯ’, ‘ಛಲವಾದಿ’ ಇತ್ಯಾದಿ ಬರೆಸಬೇಕು, ಉಪ ಜಾತಿಯಲ್ಲಿ ಹೊಲೆಯ ಎಂದೇ ಬರೆಸಬೇಕು ಎಂದು ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದರು.