ಭಾರತೀಯ ಕಿಸಾನ್ ಸಂಘ ವ್ಯಕ್ತಿ ಆಧಾರಿತ ಸಂಘಟನೆ ಅಲ್ಲ, ರೈತಪರ ಸಂಘಟನೆ: ಸಾಯಿರೆಡ್ಡಿಇಲ್ಲಿ ರೈತರೇ ನಮ್ಮ ಸಂಘಟನೆ ನಾಯಕರಾಗಿ ಕೆಲಸ ಮಾಡಲಿದ್ದಾರೆ. ವ್ಯಕ್ತಿ ಆಧಾರಿತ ಸಂಘಟನೆಯಲ್ಲ. ಇದೊಂದು ತತ್ವ,ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಂಘಟನೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಪಕ್ಷದ ಜವಾಬ್ದಾರಿ ಹೊತ್ತ ವ್ಯಕ್ತಿಗಳು ಬದಲಾವಣೆಯಾಗಲಿದ್ದು, ಹೊಸ ವ್ಯಕ್ತಿಗೆ ಜವಾಬ್ದಾರಿಕೊಟ್ಟು ರೈತರ ಪರವಾಗಿ ಕೆಲಸ ಮಾಡಲಾಗುತ್ತದೆ.