ಹಣ, ಹೆಂಡ, ಜಾತಿ ಮೇಲೆ ಮತ ಕೇಳಲ್ಲಈಗಾಗಲೇ ಕ್ಷೇತ್ರದ ಎಲ್ಲೆಡೆ ಪ್ರವಾಸ ಮಾಡಿ ಬಂದಿದ್ದೇನೆ. ನನ್ನ ಪರ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸವಿದೆ. ನನ್ನ ಹೋರಾಟವನ್ನು ಅವರು ಗುರುತಿಸಿದ್ದಾರೆ. ಈಗಾಗಲೇ ನೌಕರರ ಸಮಸ್ಯೆಗಳ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ಹೋರಾಟದ ಹಿನ್ನೆಲೆಯಲ್ಲಿಯೇ ಮತ ಕೇಳುತ್ತೇನೆ. ನೌಕರರ ಸಮಸ್ಯೆಗಳು ನನಗೆ ಗೊತ್ತಿವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ.