ಹಸಿತ್ಯಾಜ್ಯ ಸಿಎನ್‌ಜಿ ಮಾರುಕಟ್ಟೆಗೆ ಶೀಘ್ರ ಅನುಮತಿ: ರಾಜೇಶ್ ನಾಯ್ಕ್ಈ ಹಸಿ ತ್ಯಾಜ್ಯದಿಂದ ಅನಿಲದ ಜತೆಗೆ ನಿತ್ಯ 15 ಕೆಜಿಯಷ್ಟುಗೊಬ್ಬರವೂ ಈ ಘಟಕದ ಮೂಲಕ ತಯಾರಾಗುತ್ತಿದೆ. ಸುಮಾರು 60 ಸೆಂಟ್ಸ್ ಪ್ರದೇಶದಲ್ಲಿ ಈ ಘಟಕವನ್ನು ರಚಿಸಲಾಗಿದ್ದು, ಸುಮಾರು 4 ಕೋಟಿ ರು.ಗಳಷ್ಟುಹೂಡಿಕೆ ಮಾಡಲಾಗಿದೆ. ಇನ್ನೂ 15 ಟನ್ ಹಸಿ ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿದ್ದು, ಇನ್ನಷ್ಟು ಹಸಿ ತ್ಯಾಜ್ಯ ದೊರೆತದೆ ಇನ್ನೊಂದು ಘಟಕ ರಚನೆಗೆ ಸಿದ್ಧ ಇರುವುದಾಗಿ ರಾಜೇಶ್ ನಾಯ್ಕ್ ತಿಳಿಸಿದರು.