ಪ್ರಕೃತಿಯ ಸಮತೋಲನಕ್ಕೆ ಸರಿಸೃಪಗಳು ಅವಶ್ಯ: ಡಾ.ಗೌರಿಶಂಕರ್ಕಾಳಿಂಗ ಸರ್ಪಗಳಲ್ಲಿ ನಾಲ್ಕು ಪ್ರಭೇದಗಳಿದ್ದು ಅವುಗಳ ಆಹಾರ ಪದ್ಧತಿ, ಜೀವನ ಶೈಲಿ, ಸಂತಾನೋತ್ಪತ್ತಿ, ಗೂಡು ಕಟ್ಟುವ ಪರಿ ಮತ್ತು ಅವುಗಳ ಪ್ರಭೇದಗಳು ಪರಿಸರ ಸಮತೋಲನಕ್ಕೆ ಪೂರಕವಾಗಿಯೂ ಇದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಕಾಳಿಂಗ ಸರ್ಪ ಒಂದು ಪ್ರತ್ಯೇಕ ಪ್ರಭೇದವಾಗಿದ್ದು ಈ ಪ್ರಭೇದಕ್ಕೆ ಕನ್ನಡದ ಹೆಸರಿನಲ್ಲೇ ಕರೆಯುವ ಮೂಲಕ ಜಾಗತಿಕವಾಗಿಯೂ ಈ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನ ನಡೆದಿದೆ.