ಚಿಕಿತ್ಸೆಯಲ್ಲಿ ನ್ಯೂನತೆ: ಗಿರಿಜಾ ಡೆಂಟಲ್ ಕೇರ್ಗೆ 9.24 ಲಕ್ಷ ರು. ಪರಿಹಾರಕ್ಕೆ ಆದೇಶಅಗ್ರಹಾರ ಬೀದಿಯ ಪಾರ್ಕ್ ಎದುರಿನಲ್ಲಿರುವ ಗಿರಿಜಾ ಡೆಂಟಲ್ ಕೇರ್ನ ದಂತ ವೈದ್ಯ ಡಾ.ಮಂಜುನಾಥ್ ಅವರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾದೀಶ ಎಂ.ವಿ. ಭಾರತಿ ಹಾಗೂ ಸದಸ್ಯರಾದ ಕೆ.ಎಸ್. ರಾಜು ಅವರು ಪೀಠ ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ದೃಢಪಟ್ಟಿರುವುದರಿಂದ ಫಲಾನುಭವಿ ಸುಕನ್ಯಾ ಅವರಿಗೆ ವೈದ್ಯಕೀಯ ವೆಚ್ಚ 6,14,605 ರು. ಹಾಗೂ 3 ಲಕ್ಷ ರು. ಪರಿಹಾರ ಮತ್ತು 10 ಸಾವಿರ ರು. ದಂಡ ಸೇರಿ 9,24,605 ರು. ಪಾವತಿ ಮಾಡುವಂತೆ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದಾರೆ