ಪೆನ್‌ಡ್ರೈವ್: ಪ್ರಜ್ವಲ್ ನಿವಾಸ ಪರಿಶೀಲಿಸಿದ ಎಫ್ಎಸ್ಎಲ್ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪಕ್ಕದಲ್ಲೆ ಇರುವ ಲೋಕಸಭಾ ಸದಸ್ಯರ ನಿವಾಸವನ್ನು ಸೋಮವಾರ ಬೆಳಗಿನಿಂದಲೇ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ತಪಾಸಣೆ ನಡೆಸಿದೆ. ಸತತ ನಾಲ್ಕು ಗಂಟೆಗಳ ಕಾಲ ಸಂಸದರ ಮನೆಯ ಪರಿಶೀಲನೆ ನಡೆಸಿ ಅತ್ಯಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಅನೇಕ ದಾಖಲೆಗಳನ್ನು ಸಂಗ್ರಹಿಸಿ ಅಧಿಕಾರಿಗಳು ಅಲ್ಲಿಂದ ಹೊರಟರು.