ಭ್ರೂಣ ಪತ್ತೆ: ಖಾಸಗಿ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಸೀಜ್ಕೆಜಿಎಫ್ ತಾಲೂಕಿನ ಆಡಂಪಲ್ಲಿ ನಿವಾಸಿ, ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮುರಗೇಶ್, ಅನಿತಾ ದಂಪತಿಗೆ ಮೊದಲು ಎರಡು ಹೆಣ್ಣು ಮಗುವಿದ್ದ ಕಾರಣ ಈ ಬಾರಿ ಗರ್ಭಿಣಿಯಾದಾಗ ಸ್ಕ್ಯಾನಿಂಗ್ ಗಾಗಿ ಇಲ್ಲಿನ ಸಂಜನಾ ಆಸ್ಪತ್ರೆಗೆ ಸೋಮವಾರದಂದು ಬಂದಿದ್ದಾರೆ. ಆಗ ಅಕ್ರಮವಾಗಿ ಸ್ಕ್ಯಾನಿಂಗ್ ಮಾಡಿದ ಆಸ್ಪತ್ರೆ ವೈದ್ಯರು, ಗರ್ಭದಲ್ಲಿ ಹೆಣ್ಣು ಮಗುವಿದೆ ಎಂದು ಹೇಳಿ, ೨೫ ಸಾವಿರ ವಸೂಲಿ ಮಾಡಿದ್ದಾರೆ ಎಂದು ದಂಪತಿ ಪೋಷಕರು ಆರೋಪಿಸಿದ್ದಾರೆ.