ಮಂಡ್ಯ ಜಿಲ್ಲೆಯಲ್ಲಿ ವಾತಾವರಣವನ್ನು ತಂಪಾಗಿಸಿದ ಮಳೆರಾಯಮಂಡ್ಯದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸುಡು ಬಿಸಿಲಿನ ವಾತಾವರಣ, ಉಷ್ಣಹವೆ ಸಾಮಾನ್ಯವಾಗಿತ್ತು. ಸಂಜೆ 4 ಗಂಟೆ ನಂತರ ಮೋಡ ಮುಸುಕಿದ ವಾತಾವರಣ ಉಂಟಾಗಿ ಬಿರುಗಾಳಿ ಸಹಿತ 15 ನಿಮಿಷಕ್ಕೂ ಹೆಚ್ಚು ಕಾಲ ಮಳೆ ಸುರಿಯಿತು. ಆದರೆ, ಜೋರಾಗಿ ಬೀಸಿದ ಬಿರುಗಾಳಿಯಿಂದಾಗಿ ಮಳೆ ಬಂದಷ್ಟೆ ವೇಗವಾಗಿ ನಿಂತಿ ಹೋಯಿತು.