ನಿರ್ಮಾಣ ಹಂತದ ಸೇತುವೆ ಕುಸಿತ: 7 ಮಂದಿಗೆ ಗಾಯಮಲ್ಲಿಪ್ಪಾಡಿಯಲ್ಲಿ ಸಾಗುವ ತೋಡಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇಕ್ಕೆಲಗಳ ಅಬಟ್‌ಮೆಂಟ್ ಕೆಲಸ ಪೂರ್ಣಗೊಂಡು ಡಬಲ್ ಸೆಂಟ್ರಿಂಗ್ ಬಳಸಿ ಸ್ಲ್ಯಾಬ್ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ಸೆಂಟ್ರಿಂಗ್ ರಾಡ್ ಜಾರಿದ ಹಿನ್ನೆಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರಿಟ್ ವ್ಯವಸ್ಥೆ ಕುಸಿತವಾಗಿದೆ.