ಗಣತಿಯಲ್ಲಿ ಧರ್ಮ, ಜಾತಿ ಲಿಂಗಾಯತ ಬರೆಸಿ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟರಾಜ್ಯಾದ್ಯಂತ ಸೆ.22ರಿಂದ 15 ದಿನ ನಡೆಯುವ ಜಾತಿಗಣತಿಯಲ್ಲಿ ಲಿಂಗಾಯತರು ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ ಹಾಗೂ ಇತರೆ ಕಾಲಂ, ಉಪ ಪಂಗಡದಲ್ಲಿ ನಿಮ್ಮ ಉಪ ಜಾತಿ ಅಥವಾ ಸಾಧ್ಯವಾದರೆ ಲಿಂಗಾಯತ ಅಂತಲೇ ಬರೆಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಕರೆ ನೀಡಿದೆ.