ಹಾಸ್ಟೆಲ್ ದುರಸ್ತಿ ಯಾವಾಗ?ಮಳೆಗಾಲದಲ್ಲಿ ಹಾಸ್ಟೆಲ್ ಕಟ್ಟಡದ ಪ್ರತಿ ಕೋಣೆಯ ಮೇಲ್ಛಾವಣಿ ಸೋರುತ್ತವೆ. ವಿದ್ಯಾರ್ಥಿಗಳು ಮಲಗುವ ಕೊಠಡಿಗಳ ಗೋಡೆಗಳಿಂದ ಸಿಮೆಂಟ್ ಪ್ಲಾಸ್ಟರ್ ಪದರಗಳು ಕಳಚಿ ಬೀಳುತ್ತಿದ್ದು, ಯಾವಾಗ ದೊಡ್ಡ ಅನಾಹುತ ಸಂಭವಿಸುತ್ತದೋ ಎಂಬ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ‘ನಾವಿಲ್ಲಿ ಓದಲು ಬಂದಿದ್ದೇವೆ, ಆದರೆ ಪ್ರತಿದಿನವೂ ಜೀವಭಯದಲ್ಲಿ ಇರಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.