ಕಾಟವಾಳು ಗ್ರಾಮದಲ್ಲಿ ವಿಜೃಂಭಣೆಯ ಶ್ರೀ ಹುಲಿಮಾಸ್ತಮ್ಮನವರ ಜಾತ್ರೆ, ಕೊಂಡೋತ್ಸವಜಾತ್ರಾ ಮಹೋತ್ಸವ ಅಂಗವಾಗಿ ಶಿವನ ದೇವಾಲಯ ಹಾಗೂ ಶ್ರೀಹುಲಿಮಾಸ್ತಮ್ಮನವರ ದೇವಸ್ಥಾನ ಮತ್ತು ಗ್ರಾಮವನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಗಿನ ಜಾವದಿಂದಲೇ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನಗಳು, ರುದ್ರಾಭಿಷೇಕ ಮಾಡಲಾಯಿತು. ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ದೇವರ ದೇವರ ಉತ್ಸವ ಮೂರ್ತಿ ವಿವಿಧ ಹೂವಿನಿಂದ ಅಲಂಕರಿಸಿ ಭಕ್ತರು, ದಾರಿಯುದ್ದಕ್ಕೂ ಭಕ್ತರು ಶ್ರೀ ಹುಲಿಮಾಸ್ತಮ್ಮ ನವರಿಗೆ ಜೈಕಾರ ಕೂಗುವ ಮೂಲಕ ದೇವರಿಗೆ ನಮಿಸಿದರು.