ಗಾಂಧೀಜಿ ತತ್ವ ಸಾರುವ ಸರ್ಕಾರವೇ ಅದನ್ನು ಗಾಳಿಗೆ ತೂರುತ್ತಿವೆಸರ್ಕಾರಗಳು ಗಾಂಧಿ ಹೆಸರು ಹೇಳುತ್ತಾ ಅವರ ತತ್ವಗಳನ್ನು ಗಾಳಿಗೆ ತೋರುತ್ತಿವೆ. ಮದ್ಯಪಾನ ಮಾಡುವುದು ಕುಟುಂಬಕ್ಕೆ, ಸಮಾಜಕ್ಕೆ ಮಾರಕ ಎಂಬುದನ್ನು ಗಾಂಧೀಜಿ ಅಂದೇ ಪ್ರತಿಪಾದಿಸಿದ್ದರು. ಆದರೆ, ಇಂದು ಅಧಿಕಾರದಲ್ಲಿರುವ ಸರ್ಕಾರಗಳು ಪ್ರತಿ ತಿಂಗಳು ಅಬಕಾರಿ ಇಲಾಖೆಯಿಂದ ವರಮಾನ ಹೆಚ್ಚುವಂತೆ ಮಾಡುವ ಮೂಲಕ ಇಂದು ಪರೋಕ್ಷವಾಗಿ ಜನರನ್ನು ದುಶ್ಚಟಗಳಿಗೆ ದೂಡುವ ಮೂಲಕ ಗಾಂಧಿ ತತ್ವಗಳನ್ನು ಮೂಲೆಗುಂಪು ಮಾಡುತ್ತಿವೆ. ಈ ಮಧ್ಯೆ ಧರ್ಮಸ್ಥಳ ಸ್ವಸಹಾಯ ಸಂಘ ಮದ್ಯಪಾನ ಚಟದಿಂದ ಹೊರತರುವ ಕೆಲಸದಲ್ಲಿ ತೊಡಗಿಕೊಂಡಿರವುದು ನಿಜಕ್ಕೂ ಶ್ಲಾಘನೀಯ ಎಂದರು.