ಕಳೆದ ಐದು ವರ್ಷಗಳಿಂದ ನೇಮಕಾತಿ ಹಗರಣ, ವಿವಾದದಲ್ಲೇ ಮುಳುಗಿ ತಿಂಗಳ ಹಿಂದಷ್ಟೇ ಪ್ರಾರಂಭವಾಗಿದ್ದ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ) ಅಂತಿಮ ಹಂತದ ನೇಮಕಾತಿ ಪ್ರಕ್ರಿಯೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮತ್ತೆ ತಡೆಯಾಜ್ಞೆ ನೀಡಿದೆ.
ಅಮೆರಿಕ ಮೂಲದ ಆಂಥ್ರೊಪಿಕ್ ಎನ್ನುವ ಕೃತಕ ಬುದ್ಧಿಮತ್ತೆ (ಎಐ) ಸುರಕ್ಷತೆ ಮತ್ತು ಸಂಶೋಧನಾ ಸ್ಟಾರ್ಟಪ್ ಕಂಪನಿಯ ಹೊಸ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಆಗಿ ಬಾಗಲಕೋಟೆ ಮೂಲದವರಾದ ರಾಹುಲ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿಧಿಸಿದ್ದ ಅಂತಿಮ ಗಡುವು ಹತ್ತಿರವಾಗುತ್ತಿದೆ. ಇನ್ನು ಕೇವಲ ಮೂರು ದಿನಗಳ ಸಮೀಕ್ಷೆ ಬಾಕಿಯಿದ್ದು, ಶನಿವಾರದ ವೇಳೆಗೆ ಶೇ.71.31 ಕುಟುಂಬಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.
ನಟ ದರ್ಶನ್ ತಂಡಕ್ಕೆ ವಿಶೇಷ ಆತಿಥ್ಯ ನೀಡಿದ ವಿವಾದದ ನಂತರ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತನ್ನ ಸಹಚರರ ಜತೆ ರೌಡಿಯೊಬ್ಬ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಸೆ.2ರಂದು ಬಿಬಿಎಂಪಿ ವಿಸರ್ಜನೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಯಿತು. ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ರಚನೆಯಾದ ಐದು ನಗರ ಪಾಲಿಕೆಯ ಅಧಿಕಾರಿ-ಸಿಬ್ಬಂದಿಗೆ ಸೆಪ್ಟೆಂಬರ್ ವೇತನ (ಜಿಬಿಎ ರಚನೆಯಾದ ಮೊದಲ ತಿಂಗಳು) ಪಾವತಿಯಾಗಿಲ್ಲ.
ಪರಸಂಗದಲ್ಲಿದ್ದಾಗ ತನ್ನ ಪ್ರಿಯತಮನ ಜತೆ ಜಗಳವಾಡಿ ವಿವಾಹಿತೆಯೊಬ್ಬಳು ನೇಣು ಬಿಗಿದು ಆತ್ಮ*ತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ನಿವಾಸಿ ಯಶೋಧ ಮೃತ ದುರ್ದೈವಿ.