ಸ್ಫೋಟದಲ್ಲಿ ಗಾಯಗೊಂಡಿದ್ದ ದಂಪತಿ ಸಾವುಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗಳಿಂದ ಸಾವು ಬದುಕಿನ ಜೊತೆ ಎರಡು ದಿನ ಹೋರಾಟ ನಡೆಸಿದ ದಂಪತಿ ಚಿಕಿತ್ಸೆ ಫಲ್ಲಿಸದೆ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರವನ್ನು ಹಾಸನದ ಬಿಟ್ಟಗೌಡನಹಳ್ಳಿ ಸ್ಮಶಾನದಲ್ಲಿ ಗುರುವಾರ ಬೆಳಗ್ಗೆ ನೆರವೇರಿಸಲಾಯಿತು. ಹೊರವಲಯದಲ್ಲಿರುವ ಹಳೆ ಆಲೂರು ಗ್ರಾಮದ ಸಮೀಪ ವಾಸದ ಮನೆಯಲ್ಲಿ, ಸೋಮವಾರ ರಾತ್ರಿ ನಿಗೂಢ ವಸ್ತುಗಳು ಸ್ಫೋಟಗೊಂಡಿತ್ತು.