ವಿಜಯದಶಮಿಗೆ ‘ಮಂಡ್ಯ ದಸರಾ’ ರಂಗು...!ಆಕರ್ಷಿಸಿದ ಕಾಂತಾರ ಚಿತ್ರದ ಪಂಜುರ್ಲಿ ದೈವ, ವರ್ಣರಂಜಿತ ವಿಶೇಷ ರಥದಲ್ಲಿ ರಾರಾಜಿಸಿದ ನಾಡದೇವತೆ, ಬೆಳ್ಳಿ ರಥದಲ್ಲಿ ಮಹಾರಾಜನ ದರ್ಬಾರ್, ಅಪರೂಪವಾಗಿ ಕಂಡುಬಂದ ನಾಗರಹೊಳೆ ಕಾಡು ಜನರು ಜೊತೆಗೆ ವಿಭಿನ್ನ, ವೈಶಿಷ್ಟ್ಯಪೂರ್ಣ ಜಾನಪದ ಕಲಾತಂಡಗಳೊಂದಿಗೆ ನಡೆದ ಮಂಡ್ಯ ದಸರಾ ಮೆರವಣಿಗೆ ವಿಜಯದಶಮಿಗೆ ಮೆರುಗು ನೀಡಿತ್ತು.