ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಅಭಿಮನ್ಯು ಆನೆಯು ಸತತ 6ನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ಗಾಂಭೀರ್ಯದ ಹೆಜ್ಜೆ ಹಾಕುವ ಮೂಲಕ ಜಂಬೂಸವಾರಿಯನ್ನು ಯಶಸ್ವಿಗೊಳಿಸಿತು.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ನಂದೀಧ್ವಜ, ವೀರಭದ್ರ ಕುಣಿತ, ಕೊಂಬು ಕಹಳೆ, ನಂದಿ ಕೋಲು, ಜಗ್ಗಲಗಿ ಮೇಳ ಸೇರಿದಂತೆ ರಾಜ್ಯ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಜಿಲ್ಲೆಯ ಕಲಾ ತಂಡಗಳು, ಕಲಾವಿದರು ಉತ್ತಮವಾಗಿ ಪ್ರದರ್ಶಿಸಿದರು.
ದಸರಾ ವಿಜಯದಶಮಿ ಮೆರವಣಿಗೆಯ ಕೇಂದ್ರ ಬಿಂದು ಚಿನ್ನದ ಅಂಬಾರಿ ಹಾಗೂ ಅಂಬಾರಿಯನ್ನು ಹೊರುವ ಆನೆ. ಅಂತಹ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಆನೆಯ ಮೇಲೆ ಸೊಗಸಾಗಿ ಕಟ್ಟುವುದೇ ಒಂದು ಕಲೆಗಾರಿಕೆ ಆಗಿದೆ.