ಬೆಳ್ಳಿ ಇಟ್ಟಿಗೆ, ಶ್ರೀರಾಮ ಭಕ್ತರಿಗೆ ದಿನೇಶ ಶೆಟ್ಟಿ ಅವಮಾನ ಸಹಿಸಲ್ಲಸ್ವಾತಂತ್ರ್ಯ ಹೋರಾಟದ ವೇಳೆ 1942ರಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ 6 ಜನ ಸ್ವಾತಂತ್ರ್ಯ ಹೋರಾಟಗಾರರು, 90ರ ದಶಕದ ರಾಮಜ್ಯೋತಿ ರಥಯಾತ್ರೆ ವೇಳೆ ಬಲಿಯಾದ 8 ಮಂದಿ ಶ್ರೀರಾಮ ಭಕ್ತರ ಕುಟುಂಬಗಳ ಪೈಕಿ ಎಷ್ಟು ಕುಟುಂಬಕ್ಕೆ ನಿಮ್ಮ ಕಾಂಗ್ರೆಸ್ ಆಳ್ವಿಕೆಯಲ್ಲಿ ಸೂರು, ಸೌಲಭ್ಯ, ನೆರವು ನೀಡಿದ್ದೀರಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಹರಿಹಾಯ್ದರು.