ಗಾಳಿಪಟಗಳಲ್ಲೂ ಗಮನ ಸೆಳೆದ ಜಸ್ಟೀಸ್ ಫಾರ್ ಸೌಜನ್ಯ ಸಂದೇಶದೊಡ್ಡಬಳ್ಳಾಪುರ: ಜಸ್ಟೀಸ್ ಫಾರ್ ಸೌಜನ್ಯ ಅಭಿಯಾನ ದೊಡ್ಡಬಳ್ಳಾಪುರದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲೂ ಪ್ರತಿಧ್ವನಿಸಿದೆ. ಸೌಜನ್ಯಗೆ ನ್ಯಾಯ ಸಿಗಲಿ, ನ್ಯಾಯ ಬೆಳಕಿಗೆ ಬರಲೇ ಬೇಕು, ಸೌಜನ್ಯ ಹೆಣ್ಣಲ್ಲ; ಒಂದು ಶಕ್ತಿ ಇತ್ಯಾದಿ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಬಾನಂಗಳಕ್ಕೆ ಲಗ್ಗೆ ಇಟ್ಟು ನ್ಯಾಯದ ಬೇಡಿಕೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದವು.