ಶೃಂಗೇರಿಯಲ್ಲಿ ಮಳೆ ಅಬ್ಬರದ ನಡುವೆಯೂ ದೀಪಾವಳಿ ಸಂಭ್ರಮ.ಶೃಂಗೇರಿ, ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಮಳೆ ನಡುವೆ ದೀಪಾವಳಿ ಸಂಭ್ರಮ ಕಂಡುಬಂದಿತು. ಬಲಿಪಾಡ್ಯಮಿ ದಿನ ಬುಧವಾರ ಶ್ರೀಮಠದ ನರಸಿಂಹವನದಲ್ಲಿ ಗೋಪೂಜೆ, ಗೋಶಾಲೆಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿ ಗೋವುಗಳಿಗೆ ಪೂಜೆ ನೆರವೇರಿಸಿದರು.