ರಜತ ಮಹೋತ್ಸವ ಕಾರ್ಯ ಚಟುವಟಿಕೆಗೆ ಇಂದು ಚಾಲನೆ ಬೀಳಗಿಇಲ್ಲಿನ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಬಸವ ಜಯಂತ್ಯುತ್ಸವ, ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣೆ ಸಮಾರಂಭ ಮೇ 6ರಂದು ಬೆಳಗ್ಗೆ 11ಗಂಟೆಗೆ ಪಟ್ಟಣ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ಅಧ್ಯಕ್ಷರು, ಮಾಜಿ ಸಚಿವ ಎಸ್.ಆರ್. ಪಾಟೀಲ ತಿಳಿಸಿದರು.