ಶ್ರೀರಾಮೋತ್ಸವ: ಸಂಭ್ರಮಾಚರಣೆಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆ, ಉಪನ್ಯಾಸ, ಯುವಕರ ರ್ಯಾಲಿ ಜರುಗಿದವು.ಪಟ್ಟಣದ ಗೌರಂಪೇಟ ವೃತ್ತದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀರಾಮನ ಭಕ್ತರು, ಆಯೋಜಕರು, ಅನುಯಾಯಿಗಳು ಪಕ್ಷ, ಜಾತಿ-ಮತ ಭೇದವಿಲ್ಲದೆ ಸಂಭ್ರಮ ಆಚರಿಸಿದರು.