ಕವಿತಾಳ ಪಟ್ಟಣಕ್ಕೆ ಕಲುಷಿತ ನೀರು ಪೂರೈಕೆ, ಆತಂಕಕೆರೆಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ನೀರಿನ ಕೊರತೆ. ಬುಧವಾರ ಪೂರೈಸಿದ ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಹಸಿರು ಬಣ್ಣದ ಹೊಂಡು ಮಿಶ್ರಿತ ನೀರಿನಲ್ಲಿ ಕಸ ಕಡ್ಡಿ, ಹುಳು ಸೇರಿದಂತೆ ಗಲೀಜು ಬರುತ್ತಿದೆ. ಕುಡಿಯಲು ಇರಲಿ ಬಳಕೆಗೂ ಸಾಧ್ಯವಿಲ್ಲ ಮತ್ತು ಜಾನುವಾರುಗಳಿಗೆ ಕುಡಿಯಲು ನೀರು ಎಲ್ಲಿಂದ ತರುವುದು ಎಂದು ಪಟ್ಟಣದ ಜನತೆ ಕೇಳುವಂತಾಗಿದೆ.