21 ರಿಂದ 23ವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ: ಪಾಪಾರೆಡ್ಡಿಭಾರವಾದ ಕಲ್ಲು ಎಳೆಯುದು, ಗ್ರಾಮೀಣ ಕ್ರೀಡೆ, ಕುಸ್ತಿ ಸ್ಪರ್ಧೆ, ಕಲಾತಂಡಗಳ ಮೆರವಣಿಗೆ, ನೃತ್ಯ ರೂಪಕ ಆಯೋಜನೆ. ಜೂ.21ರಂದು ಬೆಳಗ್ಗೆ 8 ಕ್ಕೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಕರ್ನಾಟಕ ರಾಜ್ಯಗಳ ಎತ್ತುಗಳಿಂದ 1 ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ.