ಸಮಾಜಕ್ಕೆ ಶ್ರೀ ಶಿವಕುಮಾರಸ್ವಾಮೀಜಿ ಕೊಡುಗೆ ಅಪಾರ: ಸು.ತ. ರಾಮೇಗೌಡಶ್ರೀಗಳು ತಮ್ಮ ಸನ್ಯಾಸತ್ವ ಸ್ವೀಕಾರದ ದಿನದಿಂದ ಲಿಂಗೈಕ್ಯರಾಗುವವರೆಗೂ ಬದುಕಿನಲ್ಲಿ ಒಂದೇ ಒಂದು ಕ್ಷಣವೂ ತಮಗಾಗಿ ಬದುಕಿದವರಲ್ಲ. ಅವರ ಪ್ರತಿಯೊಂದು ಉಸಿರಾಟವೂ ಕಾಯಕ ಮತ್ತು ದಾಸೋಹಕ್ಕೆ ಮೀಸಲಾಗಿತ್ತು. ಪ್ರಾಥಮಿಕ ಶಾಲೆ ಹಂತದಿಂದ ಪದವಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸಂಸ್ಕೃತಿ ಕಾಲೇಜು, ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ರಾಜ್ಯದ ವಿವಿದೆಡೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಅಮೋಘವಾದದ್ದು. ಅಂತಹವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.