ಹುಲಿಕಲ್ಲು ಸರ್ಕಾರಿ ಶಾಲೆಯನ್ನೊಮ್ಮೆ ನೋಡಬನ್ನಿ!ಕುದೂರು: ಆಗಲೋ ಈಗಲೋ ಮುರಿದು ಬೀಳುವ ಕಟ್ಟಡ, ಶಿಕ್ಷಕರು ಹಾಗೂ ಮೂಲಸೌಲಭ್ಯಗಳ ಕೊರತೆ ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಾಡುವ ಸಮಸ್ಯೆ. ಆದರೆ, ಇಲ್ಲೊಂದು ಸರ್ಕಾರಿ ಶಾಲೆ ನಂದನವನದಂತೆ ಮಕ್ಕಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಸುಂದರ ವಾತಾವರಣ ರೂಪುಗೊಂಡಿದೆ.