ನಾಡಹಬ್ಬದಂತೆ ಶ್ರೀ ಚಾಮುಂಡೇಶ್ವರಿ ಕರಗೋತ್ಸವ: ಇಕ್ಬಾಲ್ ಹುಸೇನ್ಈ ನಾಡಹಬ್ಬಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿಯೂ ಸಹ ಚಲನಚಿತ್ರ ನಟ ನಟಿಯರು, ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವೇದಿಕೆಯ ಆಕರ್ಷಣೆಯಾಗಿ ಚಲನಚಿತ್ರ ನಟರಾದ ಡಾಲಿ ಧನಂಜಯ್ಯ, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಧ್ರುವಸರ್ಜಾ ಆಗಮಿಸಲಿದ್ದು, ಪ್ರಸಿದ್ದ ಹಾಡುಗಾರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರು ರಸಮಂಜರಿ ನಡೆಸಿಕೊಡುವರು. ಅನುಶ್ರೀ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.