ದಿ.ಲಿಂಗೇಗೌಡರಿಂದ ಕನಕಪುರ ಅಭಿವೃದ್ಧಿ: ನಿವೃತ್ತ ಉಪನ್ಯಾಸಕ ಮಂಚೇಗೌಡಸ್ವತಃ ಕ್ರೀಡಾಪಟುವಾಗಿ, ಈಜುಗಾರರಾಗಿ ಗ್ರಾಮಾಂತರ ಜಿಲ್ಲೆಯಲ್ಲಿಯೇ ದೈಹಿಕ ದೃಢತೆ ಹೊಂದಿದ್ದ ಇವರು, ತಾಲೂಕಿಗೆ ಒಂದು ಬೃಹತ್ ಮೈದಾನವನ್ನು ನಿರ್ಮಿಸಬೇಕೆಂದು ಪುರಸಭಾ ಹೈಸ್ಕೂಲ್ ಬಳಿ ವಿಸ್ತಾರವಾದ ಮೈದಾನವನ್ನು ನಿರ್ಮಿಸಿದರು, ಪುರಸಭಾ ಹೈಸ್ಕೂಲ್, ಕಾಲೇಜು ಪ್ರಾರಂಭಿಸಿ ಅಂದಿನ ದೂರದೃಷ್ಟಿಯ ಫಲವಾಗಿ ಇಂಗ್ಲೀಷ್ ತರಗತಿಗಳನ್ನೂ ಸಹ ಪ್ರಾರಂಭಿಸಿದರು, ಅವರ ಸೇವಾ ಅವಧಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ, ಕ್ರಿಯಾಶೀಲತೆಗೆ ಮತ್ತೊಂದು ಹೆಸರಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದರು, ಇವರ ಕನಸು, ನೆನಪುಗಳು ಮಾತ್ರ ಮುಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು .